5 kannada movies are releasing on march 23th. Yogi Duniya, Rajaratha, Varthamana, Athruptha and Mukyamantri Kaldodnappo movies will
release tomorrow.
ಪ್ರತಿ ಶುಕ್ರವಾರ ಬಂತು ಅಂದರೆ ಸಿನಿ ಪ್ರೇಮಿಗಳಿಗೆ ಹಬ್ಬ ಇದ್ದಂತೆ. ಶುಕ್ರವಾರ
ರಿಲೀಸ್ ಆಗೋ ಹೊಸ ಸಿನಿಮಾ ನೋಡದೆ ಇದ್ದರೆ ಎಷ್ಟೊ ಜನಕ್ಕೆ ನಿದ್ದೆ ಬರಲ್ಲ. ಇನ್ನು ಯು
ಎಫ್ ಒ ಮತ್ತು ಕ್ಯೂಬ್ ಸಮಸ್ಯೆಯಿಂದ ಕನ್ನಡದಲ್ಲಿ ಸಿನಿಮಾ ಪ್ರದರ್ಶನ ಸರಿಯಾಗಿ
ಆಗಿರಲಿಲ್ಲ. ಆದರೆ ಈ ವಾರದಿಂದ ಮತ್ತೆ ದೊಡ್ಡ ಸಿನಿಮಾಗಳ ಪ್ರದರ್ಶನ ಶುರುವಾಗಿದೆ.
ಭಂಡಾರಿ ಸಹೋದರರ ಸಿನಿಮಾಗೆ ಲೂಸ್ ಮಾದ ಯೋಗಿ ಸವಾಲು ಹಾಕಲು ಸಜ್ಜಾಗಿದ್ದಾರೆ. ಸ್ಯಾಂಡಲ್
ವುಡ್ ಸಿನಿಮಾಗಳ ಜೊತೆಗೆ ಬಾಲಿವುಡ್ ಅಂಗಳಕ್ಕೆ ರಾಣಿ ಮುಖರ್ಜಿ ಅವರ ಒಂದು ವಿಭಿನ್ನ ಸಿನಿಮಾ ಕಾಲಿಡುತ್ತಿದೆ.